ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ/ಪಾರಿತೋಷಕ ಇದು ವೈದ್ಯಕೀಯ ಅಥವಾ ಶರೀರಶಾಸ್ತ್ರ ಕ್ಷೇತ್ರದಲ್ಲಿನ ವಿಶಿಷ್ಟ ಸಾಧನೆಗಾಗಿ ನೀಡುವ ನೊಬೆಲ್ ಪ್ರಶಸ್ತಿ. ಈ ಪ್ರಶಸ್ತಿಯನ್ನು ಕ್ಯಾರೋಲಿನ್ಸ್ಕಾ ಇನಸ್ಟಿಟ್ಯೂಟ್ ಕೊಡುತ್ತದೆ. ಈ ಪ್ರಶಸ್ತಿಯನ್ನು ೧೯೦೧ರಲ್ಲಿ ಸ್ಥಾಪಿಸಲಾಯಿತು. ಪ್ರಥಮ ಬಾರಿಗೆ ೧೯೦೧ರಲ್ಲಿ ಈ ಪ್ರಶಸ್ತಿಯನ್ನು ಜರ್ಮನಿಯ ಎಮಿಲ್ ಅಡೊಲ್ಫ್ ವಾನ್ ಬೆಹ್ರಿಂಗ್ ಇವರಿಗೆ ಕೊಡಲಾಗಿತ್ತು. ೨೦೦೮ರ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಫ್ರಾನ್ಸ್ ದೇಶದ ಇಬ್ಬರು ವಿಜ್ಞಾನಿಗಳಿಗೆ ಮತ್ತು ಜರ್ಮನಿಯ ವಿಜ್ಞಾನಿಗೆ ಸಂಯುಕ್ತವಾಗಿ ಕೊಡಮಾಡಲಾಗುವದು. ಜರ್ಮನಿಯ ಹರಾಲ್ಡ್ ಝುರ್ ಹೌಸೆನ್ ಇವರಿಗೆ ಸರ್ವಿಕಲ್ ಕ್ಯಾನ್ಸರ್ ಉಂಟುಮಾಡುವ ವೈರಸ್ ಗಳ ಸಂಶೋಧನೆಗೆ ಮತ್ತು ಫ್ರಾನ್ಸ್ ದೇಶದ ಫ್ರಾಂಕಾಯಿಸ್ ಬ್ಯಾರ್ರೆ-ಸಿನೌಸಿ ಮತ್ತು ಲುಕ್ ಮಾಂಟೆಗ್ನಿಯರ್ ಇವರಿಗೆ ಏಯ್ಡ್ಸ್ ಉಂಟುಮಾಡುವ ರೋಗಾಣುಗಳ ಸಂಶೋಧನೆಗೆ ೨೦೦೮ರ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ. == ಪ್ರಶಸ್ತಿ ವಿಜೇತರ ಪಟ್ಟಿ == ಈ ಕೆಳಕಂಡ ಪಟ್ಟಿಯಲ್ಲಿ ೧೯೦೧ ಇಸವಿಯಿಂದ ವೈದ್ಯಶಾಸ್ತ್ರದಲ್ಲಿ ನೊಬೆಲ್ ಪಾರಿತೋಷಕವನ್ನು ಪಡೆದವರನ್ನು ಪಟ್ಟಿ ಮಾಡಲಾಗಿದೆ. ಇದರಲ್ಲಿ ೧೮೯ ಮಂದಿ ಇದ್ದಾರೆ. == ಬಾಹ್ಯ ಸಂಪರ್ಕ == 2008-08-27 ವೇಬ್ಯಾಕ್ ಮೆಷಿನ್ ನಲ್ಲಿ. – . 2007-10-27 ವೇಬ್ಯಾಕ್ ಮೆಷಿನ್ ನಲ್ಲಿ. – ; . 2006-08-15 ವೇಬ್ಯಾಕ್ ಮೆಷಿನ್ ನಲ್ಲಿ. – . 2007-10-30 ವೇಬ್ಯಾಕ್ ಮೆಷಿನ್ ನಲ್ಲಿ. – . == ಉಲ್ಲೇಖಗಳು ==